ಮೊದಲು ಟೈಮ್ಸ್ ಪತ್ರಿಕೆಯ ನೂರರ ಬಂಡಲ್ಲುಗಳನ್ನು ಹಾಗೂ ಅದರ ಸಪ್ಲಿಮೆಂಟರಿಗಳನ್ನು ತಂದು ಫುಟ್ ಪಾತಿನ ಒಂದು ಮೂಲೆಯಲ್ಲಿ ಇಟ್ಟು ತನ್ನ ಹುಡುಗರಿಗೆ ಆ ಸಪ್ಲಿಮೆಂಟರಿಗಳನ್ನು ಮೈನ್ ಶೀಟಿಗೆ ಸೇರಿಸಲು ಹೇಳಿ ಸ್ವಲ್ಪದೂರದಲ್ಲಿ ಇದ್ದ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಗ್ರೂಪಿನ ಪತ್ರಿಕೆಗಳನ್ನು ತರಲು ಹೋಗಿದ್ದ.
ಸಪ್ಲಿಮೆಂಟರಿ ಹಾಕುತ್ತಿದ್ದ ಹುಡುಗರು ಪಾಂಪ್ಲೆಟ್ಸ್ ಬಂದಿದೆ ಎಂದು ಯಾರೋ ಕೂಗಿದ್ದರಿಂದ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಆ ಕಡೆ ಓಡಿದರು.[ನಮ್ಮ ಹುಡುಗರಿಗೆ ಸಪ್ಲಿಮೆಂಟರಿ ಹಾಕುವುದಕ್ಕಿಂತ ಈ ರೀತಿ ಪಾಂಪ್ಲೆಟ್ಸ್ ಹಾಕುವುದಕ್ಕೆ ಇಷ್ಟ. ಇವನ್ನು ನೂರು ಪತ್ರಿಕೆಗಳಿಗೆ ಸೇರಿಸಿದರೆ ೧೦-೧೫ ರೂಪಾಯಿ ಕೊಡುತ್ತಾರೆ. ಆ ಕಾರಣಕ್ಕಾಗೆ ನಮ್ಮ ಬೀಟ್ ಹುಡುಗರಿಗೆ ಈ ಪಾಂಪ್ಲೆಟ್ಟಿನ ಮೇಲೆ ವಿಶೇಷ ಒಲವು].
ಅದುವರೆಗೂ ಎಲ್ಲಿತ್ತೋ ಆ ನಾಯಿ, ಎಲ್ಲಿ ಕುಳಿತು ಕಾಯುತ್ತಿತ್ತೋ, ಮತ್ತೆ ಎಷ್ಟು ಹೊತ್ತಿನಿಂದ ತಡೆದುಕೊಂಡು ಕುಂತಿತ್ತೋ ಮಣಿ ತಂದಿರಿಸಿದ್ದ ಅನಾಥವಾಗಿ ಪುಟ್ ಪಾತ್ ಮೇಲೆ ಬಿದ್ದಿದ್ದ ಟೈಮ್ಸ್ ಪತ್ರಿಕೆಯ ಸಪ್ಲಿಮೆಂಟರಿಗಳ ಮೇಲೆ ತನ್ನ ಹಿಂದಿನ ಒಂದು ಕಾಲೆತ್ತಿ ಮೂತ್ರವನ್ನು ಸುರಿಸಿಯೇ ಬಿಟ್ಟಿತ್ತು. ಮರುಕ್ಷಣದಲ್ಲಿ ದೂರದಲ್ಲಿ ಹೋಗಿ ಮರೆಯಾಗಿ ಯಾರಿಗೂ ಕಾಣದ ಹಾಗೆ ಕುಳಿತುಕೊಂಡುಬಿಟ್ಟಿತು.
[ಶಿವು ರಚಿಸಿದ ಮೊದಲ ರೇಖಾ ಚಿತ್ರ]
ಬೇರೆ ದಿನಪತ್ರಿಕೆ ತರಲು ಹೋಗಿದ್ದ ಮಣಿ ತಂದಿದ್ದ ಪೇಪರುಗಳನ್ನು ಕೆಳಗಿಟ್ಟು ಕೂತ. ಆ ಕತ್ತಲಲ್ಲಿ ಮೂಗಿಗೆ ಕೆಟ್ಟ ಮೂತ್ರದ ವಾಸನೆ ಬಡಿಯಿತು. "ಯಾರೋ ಬೋಳಿಮಗ ನಾವು ಇಲ್ಲಿ ಕೂತುಕೊಳ್ಳೋ ಜಾಗದಲ್ಲೇ ಗಲೀಜು ಮಾಡಿದ್ದಾನೆ" ಅಂತ ಬೈಯ್ಯುತ್ತಾ ಪಕ್ಕದಲ್ಲಿ ಕುಳಿತುಕೊಂಡ.
ತಕ್ಷಣ ಅವನಿಗನ್ನಿಸಿದೇನೆಂದರೆ ಈಗ್ಗೆ ೧೦ ನಿಮಿಷದ ಹಿಂದೆ ಬಂದಾಗ ಇಲ್ಲಿ ಯಾವ ಕೆಟ್ಟವಾಸನೆಯೂ ಇರಲಿಲ್ಲ. ಆದರೆ ಈಗ ನೋಡಿದರೆ ಈ ದರಿದ್ರ ಮೂತ್ರದ ವಾಸನೆ ಬರುತ್ತಿದೆಯಲ್ಲ.! ಅನ್ನುತ್ತಾ ಆ ಕತ್ತಲೆಯಲ್ಲೇ ಟೈಮ್ಸ್ ಪತ್ರಿಕೆಗೆ ಸಪ್ಲಿಮೆಂಟರಿ ಹಾಕಲು ಕೈಯಿಟ್ಟ! ಕೈಗೆ ದ್ರವರೂಪದ ಸ್ವಲ್ಪ ಆಂಟಾದ ನೀರು ಕೈಗೆ ತಾಗಿ ಅಸಹ್ಯವೆನಿಸಿತ್ತು.
[ಪ್ರಮೋದ್ ರಚಿಸಿದ ರೇಖಾ ಚಿತ್ರ]
ಇದು ಯಾರ ಕೆಲಸವೆಂದು ಅವನಿಗೆ ಗೊತ್ತಾಯಿತು.[ನಾಯಿಗಳು ಹಾಗಾಗ ಎಲ್ಲಾ ದಿನಪತ್ರಿಕೆ ವಿತರಣೆಯ ಸ್ಥಳಗಳಲ್ಲೂ ಈ ರೀತಿ ತಮ್ಮ ಪ್ರಸಾದ ಹಾಕಿ ಹೋಗುತ್ತಿರುತ್ತವೆ.] ಸುತ್ತಲು ನೋಡಿದ ಯಾವ ನಾಯಿಯೂ ಕಾಣಲಿಲ್ಲ.
"ಥೂ ಸೂಳೆಮಗಂದು ನಾಯಿ, ನನ್ನ ಪೇಪರುಗಳೇ ಬೇಕಾಗಿತ್ತ ಇದಕ್ಕೆ, ಸಿಕ್ಕಲಿ ನನಮಗಂದು ಕೈ ಕಾಲು ಮುರಿದುಹಾಕ್ತೀನಿ ಎಂದು ಜೋರಾಗಿ ಬೈಯ್ಯುತ್ತಾ ಸುತ್ತಮುತ್ತ ನೋಡಿದ. ಇನ್ನು ಬೆಳಕಾಗಿಲ್ಲವಾದ್ದರಿಂದ ಅವನ ಕಣ್ಣಿಗೆ ಆ ನಾಯಿ ಕಾಣಿಸಲಿಲ್ಲ.
ಸುತ್ತಲು ನೋಡಿದ! ತನ್ನ ಇಬ್ಬರು ಬೀಟ್ ಹುಡುಗರು ಕಾಣಿಸಲಿಲ್ಲ. ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ ಎನ್ನುವ ಹಾಗೆ ಮೂತ್ರ ಮಾಡಿದ ನಾಯಿಯ ಮೇಲಿನ ಕೋಪ ತನ್ನ ಬೀಟ್ ಹುಡುಗರ ಕಡೆ ತಿರುಗಿತ್ತು. ಆ ರೀತಿ ಆಗಲು ಕಾರಣವೂ ಇದೆ. ಆ ಹುಡುಗರು ಇಲ್ಲಿಯೇ ಇದ್ದು ನೋಡಿಕೊಂಡಿದ್ದರೇ ಆ ನಾಯಿ ಈಗೆ ಪೇಪರ್ ಮೇಲೆ ಗಲೀಜು ಮಾಡಿ ಹೋಗಲು ಸಾಧ್ಯವಿರಲಿಲ್ಲ.
ಆಷ್ಟರಲ್ಲಿ ಕೈ ತುಂಬಾ ಪಾಂಪ್ಲೆಟ್ಸ್ ಹಿಡಿದುಕೊಂಡು ಖುಷಿಯಿಂದ ಬರುತ್ತಿದ್ದ ಹುಡುಗರು ಕಾಣಿಸಿದರು.
"ಲ್ರೋ ಹೋಗಿದ್ರಿ?"
"ಅಣ್ಣಾ ಅಲ್ಲಿ ಪಾಂಪ್ಲೇಟ್ಸ್ ಕೊಡ್ತಾ ಇದ್ರು, ನಾವು ತಗೊಂಡು ಬರೋಣ ಅಂತ ಹೋಗಿದ್ವಿ".
"ನಿಮ್ಮ ಮುಂಡಾ ಮೋಚ್ತು, ಆ ಪಾಂಪ್ಲೆಟ್ಸ್ ಮನೆ ಹಾಳಾಗ, ನೋಡ್ರೋ ಇಲ್ಲಿ ಏನಾಯ್ತು ಅಂತ, ಟೈಮ್ಸ್ ಸಪ್ಲಿಮೆಂಟರಿ ಮೇಲೆಲ್ಲಾ ಯಾವುದೋ ನಾಯಿ ಉಚ್ಚೇ ಉಯ್ದು ಹೋಗಿದೆಯಲ್ರೋ, ನೀವು ಇಲ್ಲಿದ್ದು ಈ ಸಪ್ಲಿಮೆಂಟರಿ ಹಾಕ್ಕೊಂಡು ಕೂತಿದ್ರೆ, ಆ ನಾಯಿ ಇಲ್ಲಿಗೆ ಬಂದು ಈ ರೀತಿ ಮಾಡ್ತಿತ್ತೇನ್ರೋ? ನೋಡ್ರೋ ಈಗ ಏನು ಮಾಡೋದು ಇದನ್ನ ಹೇಗೋ ಮನೆಗಳಿಗೆ ಕಳಿಸೋದು?"
ಮಣಿ ಕೋಪದಿಂದ ಒಂದೇ ಸಮನೆ ಬೈಯ್ಯುತ್ತಿದ್ದ.
ತಮ್ಮ ಓನರ್ ತಮ್ಮನ್ನು ಉದ್ದೇಶಿಸಿ ಬೈಯ್ಯುತ್ತಿರುವುದು ಗೊತ್ತಾದರೂ, ಅದಕ್ಕೆ ಕಾರಣ ತಿಳಿದು ಆ ಇಬ್ಬರು ಹುಡುಗರಿಗೂ ನಗು ಬಂತು. ಆದರೆ ನಗುವಂತಿಲ್ಲ. ಮೊದಲೇ ಚಿಕ್ಕ ಹುಡುಗರು ಇನ್ನೂ ವಯಸ್ಸು ಹದಿನೈದು ದಾಟಿರಲಿಲ್ಲ, ಹುಡುಗುಬುದ್ಧಿ. ಈ ರೀತಿ ನಾಯಿ ದಿನಪತ್ರಿಕೆ ಮೇಲೆ ಉಚ್ಚೆ ಉಯ್ದು ಹೋಗಿದೆ ಇನ್ನುವುದು ಒಂದು ತಮಾಷೆ! ಅಂತದ್ದರಲ್ಲಿ ಈ ಹುಡುಗರನ್ನು ಕೇಳಬೇಕೆ! ನಗು ಹೊಟ್ಟೆಯೊಳಗಿಂದ ಒತ್ತರಿಸಿಕೊಂಡಿ ನುಗ್ಗು ಬಂದಾಗಲೂ ತಡೆದುಕೊಳ್ಳಲಿಕ್ಕೆ ಸಾಧ್ಯವೇ?
ಮಣಿ ಬೈಯ್ಯುತ್ತಿದ್ದರೂ ಕೂಡ ಆ ಹುಡುಗರಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಜೋರಾಗಿ ನಗಲಾರಂಭಿಸಿದರು.
ನಾನು ಬೈಯ್ಯುತ್ತಿದ್ದರೂ ನನ್ನ ಮಾತಿಗೆ ಬೆಲೆ ಕೊಡದೆ ನಗುತ್ತಿದ್ದಾರಲ್ಲ, ಮಣಿಗೆ ಮತ್ತಷ್ಟು ಸಿಟ್ಟು ಬಂತು.
"ತೊಲಗ್ರೋ, ನನ್ನ ಕಣ್ಣ ಮುಂದೆ ನಿಲ್ಲಬೇಡಿ" ಎಂದ. ಅವನ ಕೋಪವಿನ್ನು ಕಡಿಮೆಯಾಗಿರಲಿಲ್ಲ.
ಮರುಕ್ಷಣವೇ ಆ ಇಬ್ಬರೂ ಹುಡುಗರು ಕಣ್ಣಂಚಿನಲ್ಲೆ ಮಾತಾಡಿಕೊಂಡರು. ಇನ್ನು ಇಲ್ಲೇ ಇದ್ದರೇ ನಮಗೆ ಮತ್ತಷ್ಟು ಮಂಗಳಾರತಿ ಗ್ಯಾರಂಟಿ ಎಂದುಕೊಂಡು ಅವನ ಕಣ್ಣಿಂದ ಕೂಡಲೇ ಮರೆಯಾದರು.
ಮಣಿಯ ಕೋಪ ನಿದಾನವಾಗಿ ಕಡಿಮೆಯಾಯಿತು. ನಿದಾನವಾಗಿ ನಡೆದ ಘಟನೆಯನ್ನೆಲ್ಲಾ ಮತ್ತೊಮ್ಮೆ ಮೆಲುಕುಹಾಕಿದ. ನಾನು ಹುಡುಗರಿಗೆ ಬೈಯ್ದಿದ್ದು ತಪ್ಪೆಂದು ಅವನಿಗೆ ಅನಿಸಿತ್ತು. ಈ ನಾಯಿ ಹೀಗೆ ಮಾಡುತ್ತದೆ ಅಂತ ಅವರಿಗೇನು ಗೊತ್ತು? ಗೊತ್ತಿದ್ದರೇ ಈ ರೀತಿ ಬಿಟ್ಟುಹೋಗುತ್ತಿರಲಿಲ್ಲವಲ್ಲ ಎಂದುಕೊಂಡ.
ಇದು ನನಗಾಗದೆ ಬೇರೆಯವರಿಗೆ ಆಗಿದ್ದರೆ ಅಂದುಕೊಂಡ. ಅವನ ಸಿಟ್ಟೆಲ್ಲಾ ಮಾಯವಾಗಿ ನಗುಬಂತು. ತನ್ನ ಹುಡುಗರು ನಗುತ್ತಿದ್ದುದ್ದು ನಿನಪಾಗಿ ಮತ್ತಷ್ಟು ನಗು ಬಂತು. ದೂರದಿಂದ ನಿಂತು ನೋಡುತ್ತಿದ್ದ ಹುಡುಗರು ಈಗ ತನ್ನ ಓನರ್ ಕೋಪ ಇಳಿದಿರಬಹುದೆಂದುಕೊಂಡು ನಿದಾನವಾಗಿ ಮಣಿ ಬಳಿ ಬಂದು ಸಪ್ಲಿಮೆಂಟರಿ ಹಾಗೂ ಪಾಂಪ್ಲೆಟ್ಸ್ ಹಾಕತೊಡಗಿದರು.
ಮಣಿಯ ಇಬ್ಬರು ಹುಡುಗರಲ್ಲಿ ಒಬ್ಬನ ಹೆಸರು ವೇಲು. ಮತ್ತೊಬ್ಬನ ಹೆಸರು ವೇಡಿ. ವೇಡಿಯಂತೂ ಮಹಾನ್ ತರಲೇ. ಒಳ್ಳೇ ಕೆಲಸಗಾರನಾದರೂ ಏನಾದರೂ ತರಲೇ ಮಾತಾಡದಿದ್ದರೆ ಅವನಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಅದರಲ್ಲೂ ಇಂಥ ಘಟನೆಗಳು ಆದಾಗ ಬಿಡುತ್ತಾನೆಯೇ? !
ತನ್ನ ಓನರ್ ಮುಖ ನೋಡಿದ. ಮಣಿ ನಗುತ್ತಿರುವುದು ಕಾಣಿಸಿತ್ತು.
"ಅಣ್ಣಾ ನಾನೊಂದು ಮಾತು ಹೇಳಲಾ" ವೇಡಿ ಕೇಳಿದ.
"ಹೂ ಹೇಳು: ಮಣಿ ಅವನೆಡೆಗೆ ತಿರಸ್ಕಾರ ನೋಟದಿಂದ.
" ನೀನು ಮತ್ತೇ ಬಯ್ಯಲ್ಲಾ ಅಂತಂದ್ರೇ ಹೇಳ್ತೀನಿ"
ಮಣಿ ಮತ್ತೊಮ್ಮೆ ಅವನ ಮುಖವನ್ನು ನೋಡಿದ ಈ ಬಾರಿ ಬೈಯಬೇಕೆನಿಸಲಿಲ್ಲ.
"ಸರಿ ಬೈಯ್ಯಲ್ಲ ಹೇಳು"
ನಾವು ಸಂಬಳ ಕೇಳಿದಾಗಲೆಲ್ಲಾ ಸರಿಯಾಗಿ ಕಲೆಕ್ಷನ್ ಆಗಿಲ್ಲ, ಆ ಗಿರಾಕಿ ಕೊಟ್ಟಿಲ್ಲ, ಈ ಗಿರಾಕಿ ಕೊಟ್ಟಿಲ್ಲಾ ಅಂತಾ ಹೇಳ್ತಿರುತ್ತೀಯಲ್ಲವಾ?
" ಹೌದು. ಕೆಲವರಿರುತ್ತಾರೆ, ನಾವು ಇಷ್ಟು ಬೇಗ ಎದ್ದು ಹೀಗೆ ಕಷ್ಟಪಟ್ಟು ಚಳಿಯಲ್ಲಿ ಕೆಲಸಮಾದಿ ಬೆಳಿಗ್ಗೆ ೬ ಗಂಟೆಗೆ ೬-೩೦ರ ಒಳಗೆ ಅವರಿಗೆ ಪೇಪರ್ ಹಾಕಿಸಿದ್ರೂ, ಹಣ ವಸೂಲಿಗೆ ಹೋದ್ರೆ, " ಈಗ ಬಾ ಆಗ ಬಾ. ನಾಳೆ ಬಾ, ಸ್ನಾನ ಮಾಡ್ತೀದ್ದಾರೆ, ಪೂಜೆ ಆಗ್ತಿದೆ, ಟಾಯ್ಲೆಟ್ಟಿನಲ್ಲಿದ್ದಾರೆ ಅಂತ ಹತ್ತಾರು ಕಾರಣ ಹೇಳಿ ಕೇವಲ ನೂರಕ್ಕೂ ಕಡಿಮೆ ಹಣಕ್ಕೆ ಐದಾರು ಸಲ ಹೋಗಬೇಕು, ನಮ್ಮ ಬಗ್ಗೆ ಅವರು ಯೋಚನೆಯನ್ನೇ ಮಾಡೊಲ್ಲ, ಕೆಲವರು ತುಂಬಾ ಬೇಜಾರು ಮಾಡಿಬಿಡುತ್ತಾರೆ.
"ಅಣ್ಣಾ ಆಂತ ಕಷ್ಟಮರುಗಳು ಯಾರ್ಯಾರು ಹೇಳಿ"
"ಯಾಕೊ"
ಈ ನಾಯಿ ಉಚ್ಚೆ ಉಯ್ದಿರುವ ಸಪ್ಲಿಮೆಂಟರಿಗಳನ್ನು ಮೈನ್ ಸೀಟಿನಲ್ಲಿ ಹಾಕಿ ಅಂತವರ ಮನೆಗಳಿಗೆಲ್ಲಾ ಹಾಕಿಬಿಡೋಣ. ಆಗ ಅವರಿಗೆ ಬುದ್ದಿ ಬರುತ್ತೇ ಅಲ್ವ" ನಗುತ್ತಾ ಹೇಳಿದ.
ಹೌದು ಕಣೋ ಹಾಗೆ ಮಾಡಬೇಕು" ವೇಡಿಯ ಮಾತನ್ನು ವೇಲು ಸಮರ್ಥಿಸಿದ.
ಅವರ ಮಾತನ್ನು ಕೇಳಿ ಮಣಿಗೆ ನಗು ಬಂತು. ಇವರು ಹೇಳುವುದು ಸರಿಯಷ್ಟೇ. ಕೆಲವೊಂದು ಗಿರಾಕಿಗಳ ಮೇಲೆ ನಮಗೆ ಭಯಂಕರ ಸಿಟ್ಟು ಬಂದು ಬಿಡುತ್ತದೆ. ಅವರು ತಿಂಗಳಿಗೊಮ್ಮೆ ಕೊಡುವ ಹಣದಲ್ಲಿಯೇ ನಮ್ಮ ಜೀವನ ನಡೆಯುವುದು, ನಮ್ಮ ಬೀಟಿನ ಹುಡುಗರ ಸಂಬಳ ಕೊಡಲಿಕ್ಕಾಗುವುದು.
ನಮ್ಮ ಕಷ್ಟದ ಅರಿವಿಲ್ಲದೇ ಈ ರೀತಿ ಸತಾಯಿಸುವ ಗಿರಾಕಿಗಳಿಗೆ ಇಂಥ ಪೇಪರ್ ಕೊಡುವುದು ತಪ್ಪೇನಿಲ್ಲವೆಂದು ಅವನಿಗೂ ಅನ್ನಿಸಿದರೂ, ಮರುಕ್ಷಣವೇ ಛೇ ನಾನು ಆ ರೀತಿ ಯೋಚಿಸಬಾರದು, ನಮ್ಮ ಗ್ರಾಹಕರು ಎಂಥವರೇ ಆಗಿರಲಿ, ಅವರು ದೇವರಿದ್ದ ಹಾಗೆ, ದಿನಪತ್ರಿಕೆಯನ್ನು ಅವ್ರು ಕೊಂಡು ಓದದೇ ಇದ್ದಿದ್ದಿರೇ ನಮಗೆ ಈ ಪತ್ರಿಕೆ ಹಂಚುವ ಕೆಲಸವೇ ಸಿಗುತ್ತಿರಲಿಲ್ಲ. ಆ ಕೆಲಸದಿಂದಾಗಿಯೇ ನಮ್ಮ ಜೀವನ ಈಗ ತಕ್ಕ ಮಟ್ಟಿಗೆ ನಡೆಯುತ್ತಿದೆಯಲ್ಲ ಎಂದು ಮಣಿಗೆ ಅನಿಸಿತೇನೋ?
" ಲೋ ವೇಡಿ, ನೋಡೊ ಇಲ್ಲಿ ನಾವು ಆಗೆಲ್ಲಾ ಮಾಡಬಾರದು. ಅವ್ರು ನಮಗೆ ದೇವರಿದ್ದ ಹಾಗೆ. ಅವರ ಮನೆಗೆ ನೀನು ಪೇಪರ್ ಹಾಕುತ್ತಿಯಲ್ಲವ ಅದನ್ನು ಖುಷಿಯಿಂದ ಓದಿ, ನಾನು ಹಣ ವಸೂಲಿಗೆ ಹೋದಾಗ ಅವರು ಖುಷಿಯಿಂದ ಹಣಕೊಡುತ್ತಾರೆ. ಆದೇ ಖುಷಿಯಿಂದಲೇ ನಾನು ನಿನಗೆ ಸಂಬಳ ಕೊಡಲಿಕ್ಕೆ ಸಾಧ್ಯ! ಅದರ ಬದಲು ಈ ಗಲೀಜು ಪೇಪರ್ ಅವರಿಗೆ ಹಾಕಿದರೆ, ಅವರಿಗೆ ಗೊತ್ತಾಗದಿದ್ದರೂ, ನಮ್ಮಲ್ಲಿ ಒಂದು ರೀತಿ ಅಪರಾಧಿ ಮನೋಭಾವನೆ ಬಂದುಬಿಡುತ್ತದೆ, ಆಲ್ವೇ? ಎಂದು ಬುದ್ದಿವಾದ ಹೇಳಿದ ಮಣಿ,
" ನೋಡು ಆದಷ್ಟು ಪೇಪರನ್ನು ಬಿಸಾಡಿ ಬೇರೆ ಪೇಪರ್ ತಗೊಂಡು ಬಾ ಹೋಗು. ತಗೋ ದುಡ್ಡು ಎಂದು ಜೇಬಿನಿಂದ ದುಡ್ಡು ಕೊಟ್ಟು ಕಳಿಸಿದ. ಅವತ್ತು ನಾಯಿಯಿಂದಾಗಿ ಅಂದಾಜು ನೂರು ರೂಪಾಯಿ ಮಣಿಯ ಜೇಬಿನಿಂದ ಕೈ ಬಿಟ್ಟಿತ್ತು.
ಮರುದಿನವೂ ಮಣಿಯ ದುರಾದೃಷ್ಟಕ್ಕೇ ಆ ನಾಯಿ ಎಲ್ಲಿತ್ತೋ? ಅವರು ಯಾರು ಇಲ್ಲದಾಗ ಮತ್ತೆ ಉಚ್ಚೇ ಉಯ್ದು ಹೋಗಿತ್ತು. ಅ ನಂತರ ಮಾಯವಾಗಿಬಿಡುತ್ತಿತ್ತು ಆ ನಾಯಿ. ಈ ನಾಯಿಯ ಕಾರ್ಯಕ್ರಮ ಆಗಾಗ್ಗೆ ಮಣಿಯ ಪೇಪರಿನ ಮೇಲೆ ಆಗುತಿದ್ದರಿಂದ ಒಂದು ದಿನ ಮಣಿ ಮತ್ತು ಅವನ ಹುಡುಗರು ಕೈಗೆ ಸಿಕ್ಕಿದ ಕಲ್ಲು ಮತ್ತು ಇಟ್ಟಿಗೆ ಚೂರುಗಳನ್ನು ಹಿಡಿದು ಮರೆಯಲ್ಲಿ ಕಾಯುತ್ತಿದ್ದರು.
ಮತ್ತೇ ಬಂತಲ್ಲ ಅದೇ ನಾಯಿ! ತನ್ನ ಹಿಂದಿನ ಕಾಲೆತ್ತಿ ಇನ್ನೇನು ತನ್ನ ಜಲಭಾದೆ ತೀರಿಸಬೇಕು! ಅಷ್ಟರಲ್ಲಿ ವೇಡಿ "ಆಣ್ಣ ಬಂತು ನೋಡು ಎಂದು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಅದರೆಡೆಗೆ ಗುರಿಯಿಟ್ಟು ಬೀಸಿದ. ಹಿಂದೆಯೇ ವೇಲು ಎಸೆದ ಕಲ್ಲು ಗುರಿತಪ್ಪದೇ ನಾಯಿಯ ಸೊಂಟಕ್ಕೆ ಬಿದ್ದು ಕುಯ್ಯೋ ಮರ್ರೋ ಎಂದು ಓಡಿಹೋಯಿತು.
ಮೂವರು ಖುಷಿಯಿಂದ ಸದ್ಯ ಕಳ್ಳನನ್ ಮಗಂದು ಸರಿಯಾಗಿ ಬುದ್ಧಿ ಕಲಿಸಿದೆವು ಎನ್ನುತ್ತಾ ತಮ್ಮ ತಮ್ಮ ಗುರಿಗಳ ಬಗ್ಗೆ ವೇಲು ಮತ್ತು ವೇಡಿ ಒಬ್ಬರಿಗೊಬ್ಬರು ಪ್ರಶಂಸಿಸಿಕೊಳ್ಳುತ್ತಾ ಆ ನಾಯಿ ಮತ್ತೆಂದು ಈ ಕಡೆ ಬರುವುದಿಲ್ಲವೆಂದುಕೊಂಡು ತಮ್ಮ ಪಾಡಿಗೆ ಕೆಲಸ ಮುಂದುವರಿಸಿದರು.
ಮರುದಿನ ನಾಯಿ ಇವರು ಹೊಡೆದ ಕಲ್ಲಿನ ಏಟಿಗೆ ಸಿಟ್ಟಿನಿಂದ ಮೊಂಡುಬಿದ್ದಿತೆಂದು ಕಾಣುತ್ತದೆ. ಹೇಗೋ ಇವರ ಕಣ್ಣು ತಪ್ಪಿಸಿ ಮತ್ತೆರಡು ಆದೇ ಕೆಲಸವನ್ನು ಮಾಡಿ ಮಾಯವಾಗಿತ್ತು.
ಈ ಪ್ರತಿನಿತ್ಯ ಮಣಿ ದಿನಪತ್ರಿಕೆಯ ಮೇಲೆ ನಾಯಿ ತನ್ನ ಜಲಭಾದೆ ತೀರಿಸಿಕೊಳ್ಳುವ ಸುದ್ಧಿ ನಮಗೆಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತು ಈ ರೀತಿ ಮಣಿಯ ದಿನಪತ್ರಿಕೆಗಳಿಗೆ ಮೂತ್ರ ಮಾಡುತ್ತಿದ್ದ ನಾಯಿ ಯಾವುದೆಂದು ಹುಡುಕಿದಾಗ ಬೇರೊಂದು ವಿಚಾರ ನಮಗೆ ತಿಳಿಯಿತು.
ನಮ್ಮ ದಿನಪತ್ರಿಕೆ ವಿತರಣೆಗಳ ಚಟುವಟಿಕೆಗಳು ನಡೆಯುವುದು ಮಾಮೂಲಿ ಫುಟ್ ಪಾತಿನಲ್ಲಿ. ನಾವು ನಾಲ್ಕು ಗಂಟೆಗೆ ಹೋಗುವಾಗ ಆ ಫುಟ್ ಪಾತಿನಲ್ಲಿ ಕೆಲವು ನಾಯಿಗಳು ಮಲಗಿರುತ್ತವೆ. ನಾವು ನಮ್ಮ ಕೆಲಸಕ್ಕಾಗಿ ಅವುಗಳನ್ನು ಅಲ್ಲಿಂದ ಓಡಿಸಿ ಆ ಜಾಗದಲ್ಲೇ ನಮ್ಮ ಕೆಲಸ ಮಾಡುತ್ತಿರುತ್ತೇವೆ. ಕೆಲವು ದಿನ ನಮ್ಮ ವಿತರಕರು ಹಾಗೂ ಹುಡುಗರ ಕಾಟ ತಾಳಲಾರದೆ, ಬೊಗಳುವುದರ ಮೂಲಕ್ ಪ್ರತಿಭಟಿಸಿದವು. ಅದಕ್ಕೆ ಕೇರ್ ಮಾಡದೆ ಇದ್ದಾಗ ಅವು ನಮ್ಮ ದಿನಪತ್ರಿಕೆಗಳ ಮೇಲೆ ಮೂತ್ರ ಮಾಡುವುದರ ಮೂಲಕ ಸೇಡು ತೀರಿಸಿಕೊಳ್ಳಲಾರಂಭಿಸಿದವು.
ನಾವು ಒಂದು ಪತ್ರಿಕೆ ಬಂಡಲ್ ತಂದಿಟ್ಟು ಮತ್ತೊಂದು ತರಲಿಕ್ಕೆ ಹೋದಾಗ ಯಾವ ಮಾಯದಲ್ಲೋ ಬಂದು ತಮ್ಮ ಕೆಲಸ ಮುಗಿಸಿಬಿಟ್ಟು ಓಡುತ್ತಿದ್ದವು. ಪ್ರತಿದಿನವೂ ಯಾರ ಪತ್ರಿಕೆಗಳ ಮೇಲಾದರೂ ಅವುಗಳ ಸ್ಟಾಂಪ್ ಇದ್ದೇ ಇರುತ್ತಿತ್ತು. ನಾವು ಅವುಗಳನ್ನು ಓಡಿಸಲು ಮಾಡಿದ ಎಲ್ಲಾ ಉಗ್ರ ಪ್ರಯತ್ನಗಳು ವಿಫಲವಾಗಿ ಕೊನೆಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಕೊನೆಯ ಅಸ್ತ್ರವಾಗಿ ನಾವೇ ಒಂದು ಉಪಾಯ ಕಂಡು ಕೊಂಡೆವು.
ಶಿವು ರಚಿಸಿದ ಎರಡನೇ ರೇಖ ಚಿತ್ರ]
ಗೆಳೆಯರಾಗಿ ಅವುಗಳ ಜೊತೆ ಹೊಂದಿಕೊಂಡು ಅವುಗಳಿಗೆ ಪ್ರತಿದಿನ ಬಿಸ್ಕೆಟ್ಟು, ಬನ್ನು ಎಲ್ಲವನ್ನು ತಂದು ಹಾಕಿ ಅವುಗಳನ್ನು ಓಲೈಸಿ ಗೆಳೆಯರನ್ನಾಗಿ ಮಾಡಿಕೊಂಡೆವು. ಅದಾದ ನಂತರ ಮುಂದೆಂದು ಅವು ತಮ್ಮ ನಾಯಿ ಬುದ್ದಿ ತೋರದೆ ನಮಗೆ ನಿಯತ್ತಾಗಿದ್ದವು.
ಅದರೆ ಮಣಿಯ ಮೇಲೇಕೆ ಆ ನಾಯಿಯ ಕೆಟ್ಟ ದೃಷ್ಟಿ ಬಿತ್ತೆಂದು ನಾವೆಲ್ಲರೂ ಯೋಚಿಸಿದಾಗ ನಮಗೆ ಗೊತ್ತಾದದ್ದು ಏನೆಂದರೆ, ಮಣಿ ಇತ್ತೀಚೆಗೆ ಹೊಸದಾಗಿ ಏಜೆನ್ಸಿ ತೆಗೆದುಕೊಂಡಿದ್ದರಿಂದ ಅವನಿಗೆ ಇವೆಲ್ಲಾ ಗೊತ್ತಿರಲಿಲ್ಲ. ಪತ್ರಿಕೆಯ ಏಜೆನ್ಸಿ ನಡೆಸಲು ಈ ರೀತಿಯ ಕಷ್ಟ-ಕೋಟಲೆಗಳು ನಾಯಿಗಳಿಂದ ಬರುತ್ತದೆಂದು ಅರಿಯದ ಹೋದ ಅಮಾಯಕನಾಗಿದ್ದ. ಕೊನೆಗೆ ಅವನಿಗೆ ನಾವು ಮಾಡಿದಂತೆ ಒಂದಷ್ಟು ದಿನ ಬ್ರೆಡ್ಡು, ಬನ್ನು, ಬಿಸ್ಕೆಟ್ಟುಗಳನ್ನು ಹಾಕಿ ಅ ನಾಯಿಯ ಜೊತೆ ಗೆಳೆತನ ಮಾಡಿಕೊ ಎಲ್ಲಾ ಸರಿಹೋಗುತ್ತದೆ ಎಂದು ಬುದ್ಧಿವಾದ ಹೇಳಿದೆವು.
ಮಣಿ ನಾವು ಹೇಳಿದಂತೆ ಕೆಲವು ದಿನ ಮಾಡಿದ ನಂತರ ಅವನಿಗೆ ಪ್ರತಿದಿನ ಆಗುವ ನಷ್ಟವು ತಪ್ಪಿಹೋಗಿ ಮತ್ತಷ್ಟು ಹುರುಪು ಉಲ್ಲಾಸದಿಂದ ಕೆಲಸ ಮಾಡುತ್ತಿದ್ದಾನೆ.
[ಈ ಮೊದಲು ಈ ಲೇಖನವನ್ನು ಬ್ಲಾಗಿಗೆ ಹಾಕಿದಾಗ ನಾನು ಬ್ಲಾಗ್ ಲೋಕಕ್ಕೆ ಹೊಸಬನಾದ್ದರಿಂದ ಒಂದಿಬ್ಬರು ಬಿಟ್ಟರೆ ಯಾರು ಬಂದು ನೋಡಿರಲಿಲ್ಲ. ಮತ್ತು ನಾನು ಮತ್ತು ನನ್ನ ಮತ್ತೊಬ್ಬ ಬ್ಲಾಗ್ ಗೆಳಯ ಪ್ರೀತಿಯಿಂದ ನನ್ನ ಈ ಲೇಖನಕ್ಕೆ ರಚಿಸಿಕೊಟ್ಟ ರೇಖಾಚಿತ್ರಗಳ ಜೊತೆಗೆ ಮತ್ತೆ ಇದೇ ಲೇಖನವನ್ನು ತಿದ್ದಿ ತೀಡಿ ಚಿಕ್ಕ ಮತ್ತು ಚೊಕ್ಕ ಮಾಡಿ ಹಾಕಿದರೆ ಚೆನ್ನಾಗಿರುತ್ತದೆ ಎನಿಸಿತ್ತು. ಇದೊಂದು ಹೊಸ ಪ್ರಯತ್ನವೆನಿಸಿ ಇಲ್ಲಿ ಹಾಕಿದ್ದೇನೆ. ಮೊದಲು ನೋಡಿದವರೂ ಸಹಕರಿಸಿ. ]
ರೇಖಾ ಚಿತ್ರಗಳು : ಶಿವು ಮತ್ತು ಪ್ರಮೋದ್.
ಲೇಖನ :ಶಿವು.
85 comments:
ರೇಖಾಚಿತ್ರಗಳು ಚೆನ್ನಾಗಿವೆ :-)
ಹರೀಶ್ ಆಷ್ಟು ಬೇಗ ನೋಡಿಬಿಟ್ಟಿರಾ ! ಥ್ಯಾಂಕ್ಸ್.
ಶಿವೂ ಸರ್,
ನಿಮ್ಮ ನಿರೂಪಣಾ ಕೌಶಲ್ಯಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ. ತುಂಬಾ ಚೆನ್ನಾಗಿದೆ.
-ರಾಜೇಶ್ ಮಂಜುನಾಥ್
ರಾಜೇಶ್ ಮಂಜುನಾಥ್
ನೀವು ಕೂಡ ನನ್ನ ಈ ಲೇಖನವನ್ನು ಇಷ್ಟು ಬೇಗ ನೋಡಿದಿರಲ್ಲ ! ನಾನಿನ್ನು edit ಮಾಡುತ್ತಿದ್ದೆ. ನಿಮ್ಮ ಪ್ರತಿಕ್ರಯೆಗೆ ಥ್ಯಾಂಕ್ಸ್.
top claass..!!
both your .. article.. and..rekhaachitragalu..
haappy new year..!!
ರೇಖಾಚಿತ್ರಗಳು xlent :-)
ashok uchangi
http://mysoremallige01.blogspot.com/
ಪ್ರಕಾಶ್ ಸಾರ್, ಆಶೋಕ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....
ಶಿವು,
ಮೊದಲೊಮ್ಮೆ ನಾನು ಈ ಲೇಖನ ಓದಿ ಖುಶಿಪಟ್ಟಿದ್ದೆ. ಈಗ ಸುಂದರ ರೇಖಾಚಿತ್ರಗಳನ್ನು ಸಹ ಕೊಟ್ಟಿದ್ದೀರಿ.
ಅಲ್ರೀ ಶಿವು, ಕೆಮರಾ, ರೇಖಾಚಿತ್ರ, ಲೇಖನ ಎಷ್ಟೆಲ್ಲಾ ಕಲೆಗಳಲ್ಲಿ ನಿಮಗೆ ಪರಿಣತಿ ಇದೆಯಲ್ರೀ!
ಹೊಸ ವರ್ಷ ನಿಮಗೆ ಶುಭಕರವಾಗಲಿ.
ಹೆಚ್ಚೆಚ್ಚು ರೇಖಾಚಿತ್ರಗಳಿಂದ ಅಲಂಕೃತ ಲೇಖನಗಳು ನಮಗೆ ಸಂತೋಷ ನೀಡಲಿ. (ಇದು ನನ್ನ ಸ್ವಾರ್ಥವಲ್ಲವೆ?)
ಶಿವಣ್ಣ,
ಎಲ್ಲಾ ರೇಖಾಚಿತ್ರಗಳು ಚೆನ್ನಾಗಿವೆ. ಲೇಖನ ಹಾಸ್ಯಮಯವಾಗಿದೆ. ನಾಯಿಯು ಸೇಡು ತೀರಿಸಿಕೊಂಡಿದ್ದು ಚೆನ್ನಾಗಿತ್ತು... ಆದರೆ ಅದರಿಂದಾದ ನಷ್ಟಕ್ಕೆ ದುಃಖವಾಯಿತು.
ಶಿವೂ,
ನಾಯಿ ಉಚ್ಚೆಯ ಪ್ರಸಂಗವನ್ನು ಹಾಸ್ಯಮಯವಾಗಿ, ಹಣಕೊಡದೆ ಸತಾಯಿಸುವ ಓದುಗ ‘ದೊರೆ’ಗಳನ್ನು ಆಕ್ಷೇಪಿಸುತ್ತಲೇ ಸುಂದರವಾಗಿ ನಿರೂಪಿಸಿದ್ದೀರಿ, ಚಿತ್ರಗಳಂತೂ ಹಾಸ್ಯಲೇಖನಕ್ಕೆ ಸೊಗಸಾಗಿ ಹೊಂದಿಕೆಯಾಗಿವೆ....
ನಿಮಗೆ ೨೦೦೯ರ ಶುಭಾಶಯಗಳು.....
ಸುನಾಥ್ ಸಾರ್,
ಮತ್ತೊಮ್ಮೆ ಇದೇ ಲೇಖನವನ್ನು ನೀವು ಓದಿದಕ್ಕೆ ಥ್ಯಾಂಕ್ಸ್. ರೇಖಚಿತ್ರಗಳನ್ನು ಮೆಚ್ಚಿದ್ದು ನನ್ನನ್ನು ಮತ್ತಷ್ಟು ಆ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಮತ್ತೊಂದು ವಿಚಾರವೆಂದರೆ ಸಾರ್ ಇವುಗಳನ್ನೆಲ್ಲಾ ನೀವು ಕಲೆ ಪರಿಣತಿ ಅನ್ನುತ್ತೀರಿ...ನಾನಿವುಗಳನ್ನು ಖಯಾಲಿ, ಹುಚ್ಚು, ಎನ್ನುತ್ತೇನೆ. ನನಗಿರುವ ಕೆಲವೇ ಖಯಾಲಿಗಳಲ್ಲಿ ಇವು ಕೆಲವು ಮಾತ್ರ. ಇನ್ನು ಕೆಲವು ಮುಂದಿನ ದಿನಗಳಲ್ಲಿ ಕಾಣಸಿಗುವ ಭರವಸೆಕೊಡುತ್ತೇನೆ.....
ಮತ್ತೆ ನಿಮಗೂ ಹೊಸ ವರ್ಷದ ಶುಭಾಶಯಗಳು.
ಜಯಶಂಕರ್,
ಲೇಖನ ಮತ್ತು ರೇಖ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಮಗಾದ ನಷ್ಟಗಳನ್ನು ನಾನು ದುಃಖಪಡದೆ ಈ ರೀತಿ ಲೇಖನಗಳನ್ನು ಬರೆದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತೇನೆ.
ವೇಣು ಆನಂದ್,
ನಾಯಿಯ ಆ......ಪ್ರಸಂಗವನ್ನು ಮತ್ತು ರೇಖಾ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....
Chennaagide :-)
ಅನ್ನಪೂರ್ಣ ದೈತೋಟ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...
shivanna...
hinde odidde idannu... eega rekha chithragala jothege maththomme odi kushi patte.
rekha chithragalu super...
nanna punya... naanu paper billannu koodale kottu biduththene...illadiddare :)
super kathe ! nimma rekha chitragaLu nice :)
ಶಿವು,
ಲೇಖನ, ಅದಕ್ಕೆ ಹೊಂದುವಂತಹ ಚಿತ್ರಗಳು, ತುಂಬಾ ಚೆನ್ನಾಗಿದೆ.
ಸುಧೇಶ್,
ನಿಮಗೊಬ್ಬರಿಗಾದರೂ ಜ್ಞಾನೋದಯವಾಯಿತಲ್ಲ.. ಇಲ್ಲದಿದ್ದಲ್ಲಿ ಇಂಥ ಸುಮಾರು ಪ್ರಯೋಗಗಳು ನಮ್ಮಲ್ಲಿವೆ.!
ಲಕ್ಷ್ಮಿ ಮೇಡಮ್, ಆನಿಲ್ ರಮೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.....
ನಾನೂ ಮೊದಲು ಓದಿದ್ದೆ. ಈಗ ಕಾರ್ಟೂನುಗಳಿಂದ ಇನ್ನೂ ಮಜಾ ಅನ್ನಿಸಿತು ಓದಕ್ಕೆ :)
ಗಿರಿಜಕ್ಕ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್..
ನಿಮಗೆ ಹೊಸ ವರ್ಷದ ಶುಭಾಶಯಗಳು...
ಲೇಖನ ಮತ್ತು ರೇಖಾಚಿತ್ರ ಎರಡು ಚೆನ್ನಾಗಿವೆ. ನಿಮ್ಮ ಈ ಬ್ಲಾಗ್ ನಿಂದ ನಿಮ್ಮ ಉಳಿದ ಮುಖಗಳನ್ನು(ನಿಮ್ಮ ಮಾತಿನಲ್ಲೇ ಖಯಾಲಿ,ಹುಚ್ಚು.)ಪರಿಚಯಿಸುತ್ತಿದ್ದೀರಿ. ತುಂಬಾ ಒಳ್ಳೆಯ ಪ್ರಯತ್ನ ಅನ್ನಿಸಿತು.ಹೀಗೆ ಬರೆಯುತ್ತಿರಿ.
ಭಾರ್ಗವಿ ಮೇಡಮ್,
ನೀವು ಈ ಬ್ಲಾಗಿಗೂ ಬಂದಿದ್ದೂ ನನಗೆ ಖುಷಿಯಾಯಿತು...
ಇವು ನನ್ನ ಮೆಚ್ಚಿನ ಬರಹಗಳು...
ಲೇಖನ ಮತ್ತು ಚಿತ್ರ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಹೀಗೆ ಬರುತ್ತಿರಿ....
ಒಳ್ಳೇ ಮಜಾ ಇದೆ ಶಿವು.
ಜೊತೆಗೆ ಹಾಕಿರೋ ಚಿತ್ರಗಳೂ ಸೂಪರ್...
ಶಿವಣ್ಣ..ಕ್ಷಮಿಸಿಬಿಡು..ಇವತ್ತು ಓದಿದೆ ನಿಮ್ 'ನಾಯಿಯ ಅಧಿಕಪ್ರಸಂಗ'ವನ್ನು. ರೇಖಾಚಿತ್ರಗಳು ತುಂಬಾ ಇಷ್ಟವಾದುವು..ನಿಮ್ಮ ಹಾಸ್ಯಮಯವಾದ ನಿರೂಪಣಾ ಶೈಲಿ ಮಜಾ ಕೊಡ್ತು.
-ಚಿತ್ರಾ
ಶಿವು ಅವರೆ...
ಲೇಖನವೂ ಹಾಸ್ಯಮಿಶ್ರಿತವಾಗಿದೆಯಲ್ಲದೆ ಓದಿಸಿಕೊಂಡು ಹೋಗುತ್ತದೆ.
ರೇಖಾಚಿತ್ರಗಳ ಬಗ್ಗೆ ಹೇಳಲೇಬೇಕು. ಏನೆಂದರೆ ನೀವು ನಿಮ್ಮೊಳಗಿನ ಈ ಅಧ್ಬುತ ಕಲೆಯನ್ನು ಖಯಾಲಿ, ಹುಚ್ಚು ಅಂತ ಹೇಳಿದ್ದೀರಿ. ನಾನಂತೂ ಈ ಮಾತನ್ನು ಒಪ್ಪುವುದಿಲ್ಲ. ಇಂಥಹ ಅದ್ಭುತ ಕಲೆ ಎಲ್ಲರಿಗೂ ಒಲಿದಿರುವುದಿಲ್ಲ, ಈಗಲೇ ಇಂಥಹದೊಂದು ಚಿತ್ರಬಿಡಿಸಿಬಿಡುತ್ತೇನಂತ ಕುಳಿತರೆ ಎಲ್ಲರಿಂದಲೂ ಸಾಧ್ಯವೂ ಇರದ ಕಲೆಯಿದು. ಪ್ರಶಂಸನೀಯ.
ಮುಂದುವರೆಸಿ ಸಾರ್.
ಶಿವು, ಲೇಖನ ಮುದಕೊಟ್ಟಿತು. ನವಿರಾದ ನಿರೂಪಣೆ, ತಕ್ಕನಾದ ರೇಖಾಚಿತ್ರ- ಖುಷಿ ಇಮ್ಮಡಿಯಾಗಿತ್ತು.
ನಿಮ್ಮ ಖಯಾಲಿ ನಮಗೆ ಸಂತಸ ಕೊಡುತ್ತಿದೆಯಾದ್ದರಿಂದ ಆ ಹುಚ್ಚಿಗೆ ಮದ್ದು ಬೇಡ.
ನಿಮ್ಮ ಹುಚ್ಚು ಹೆಚ್ಚಾಗಲಿ ದೇವರೆ!
ವಿಕಾಶ್,
ನಾಯಿ ಪ್ರಸಂಗ enjoy ಮಾಡಿದ್ದಕ್ಕೆ ಥ್ಯಾಂಕ್ಸ್...
ಚಿತ್ರಾ,
ಕೊನೆಗೂ ಬಂದೆಯಲ್ಲ. ಇನ್ನುಳಿದ ಪ್ರಸಂಗಗಳನ್ನು ಓದಿದರೆ ಮತ್ತಷ್ಟು ಖುಷಿ ಗ್ಯಾರಂಟಿ....
ಶಾಂತಲಾ ಮೇಡಮ್,
ನಾಯಿ ಪ್ರಸಂಗವನ್ನು ಓದಿದ್ದಕ್ಕೆ ಮತ್ತು ರೇಖಾ ಚಿತ್ರವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಸುಪ್ತ ದೀಪ್ತಿ ಮೇಡಮ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.....
ನನ್ನಾಕೆ ನನ್ನ ಖಯಾಲಿಗಳು ಜಾಸ್ತಿಯಾಯ್ತೆಂದು ಮದ್ದು ಹುಡುಕುತ್ತಿದ್ದಾಳೆ !
ನಿಮ್ಮ ದಿನನಿತ್ಯದ ಕೆಲಸದಲ್ಲೂ ಹಾಸ್ಯಪ್ರಸಂಗಗಳನ್ನು ಹೊರತೆಗೆದು ಬರೆಯುತ್ತಿರುವುದು ಚೆನ್ನಾಗಿದೆ, ಅದ್ರಲ್ಲೂ ಆ ಪೇಪರು ಹುಡುಗರು ಇಡುವ ಅಡ್ಡ ಹೆಸರುಗಳ(ನಿಕ್ ನೇಮ್) ಲೇಖನ ಬಹಳ ಹಿಡಿಸಿತು... ತುಮ್ಬಾ ಚೆನ್ನಾಗಿದೆ ಹೀಗೆ ಬರೆಯುತ್ತಿರಿ...
ಪ್ರಭು ಸಾರ್,
ನನ್ನ ಬ್ಲಾಗಿಗೆ ಸ್ವಾಗತ....
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಆಡ್ಡಅ ಹೆಸರಿನ ಬಗ್ಗೆ ಇನ್ನಷ್ಟು ಮಜ ಸವಿಯಲು ಇದೇ ಬ್ಲಾಗಿನಲ್ಲಿ ಆಡ್ಡ ಹೆಸರುಗಳು ಓದಿರಿ....
ಮತ್ತೆ ನನ್ನ ಇನ್ನೊಂದು ಬ್ಲಾಗ ನಲ್ಲಿ ಫೋಟೊಗಳೀಗೆ ಸಂಭಂದಿಸಿದ ಲೇಖನಗಳೀವೆ....ನಿಮಗಿಷ್ಟವಾಗಬಹುದು...ಭೇಟಿಕೊಡಿ...
http://chaayakannadi.blogspot.com/
ಶಿವು ಅವರೇ,
ನಿಮ್ಮ ರೇಖಾ ಚಿತ್ರ ಹಾಗು ಬರವಣಿಗೆ ಸೂಪರ್.
ಸುನಿಲ್
ಸುನಿಲ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...ನನ್ನ ಮತ್ತೊಂದು ಬ್ಲಾಗ್ ಛಾಯಾಕನ್ನಡಿ ನೋಡಿ ಅದರಲ್ಲಿ ನಿಮಗಿಷ್ಟವಾಗುವ ಫೋಟೋ ಮತ್ತು ಲೇಖನಗಳಿವೆ....
ನಮಸ್ಕಾರ ಶಿವೂ.
ಕ್ಷಮೆ ಇರಲಿ, ನಾನ್ ಕೂಡಾ ನಿಮ್ಮ ಬ್ಲಾಗನ್ನು ರೆಗ್ಯುಲರ್ ಆಗಿ ನೋಡ್ತಾ ಇದ್ದೆ.
ನಿಮ್ಮ ಛಾಯಾ ಕನ್ನಡಿ ಇಷ್ಟ ಆಯ್ತು ನಂಗೆ. ಬರವಣಿಗೆ ಶೈಲಿ ಕೂಡಾ ಬಹಳ ಸಿಂಪಲ್ ಆಗಿ ಇದೆ.
ಇತ್ತೀಎಚಿಗೆ ಬಹಳ ಬ್ಯುಸಿ ಆಗಿದೀನಿ, ಅದಕ್ಕೆ ಬ್ಲಾಗುಗಳನ್ನು ಓದುವುದಕ್ಕೆ ಆಗ್ತಾ ಇಲ್ಲ.
ಕಟ್ಟೆ ಶಂಕ್ರ
ನಮಸ್ತೆ ಸಾರ್,
ನೀವು ನನ್ನ ಬ್ಲಾಗಿಗೆ ಬಂದಿದ್ದೂ ತುಂಬಾ ಖುಷಿಯಾಯ್ತು....ಇನ್ನು ಮುಂದೆ ನನ್ನೆಲ್ಲಾ ಬರವಣಿಗೆಯನ್ನು ಛಾಯಾಕನ್ನಡಿಯಲ್ಲಿ ಹಾಕುತ್ತೇನೆ...ಈಗ ಅದರಲ್ಲಿ ಹೊಸದೊಂದು ಭಾವುಕ ಪೂರ್ಣ ಲೇಖನ ಹಾಕಿದ್ದೇನೆ...ಬಿಡುವು ಮಾಡಿಕೊಂಡು ಬನ್ನಿ......
nimage baravanigeya jothe rekhaa chitra bidisalu baruttade... nimma a khayali annu munduvaresi. adu ellarigu oliyuvanthaddu alla.
Baravanige ya bagge helabekadde illa... odisi kondu hoguttade.
Olleya lekhana!!!
ಶಿವು ಸರ್ ! ನಿಮ್ಮ ಬ್ಲಾಗ್ ಮೊದ್ಲಿಂದನೂ ಓದ್ತಿದೀನಿ. ಪ್ರತಿಕ್ರಿಯಿಸಿದ್ದು ಇದೇ ಮೊದಲು. ನಿಮ್ಮ ಫೋಟೋ ಗಳನ್ನೂ ನೋಡಿದ್ದೀನಿ (flickr ನಲ್ಲಿ ಮತ್ತು ನಿಮ್ಮ ಮತ್ತೊಂದು ಬ್ಲಾಗ್ ನಲ್ಲಿ) ನಿಮ್ಮ ಲೇಖನಗಳು ಓದಿಸಿಕೊಂಡು ಹೋಗುತ್ತವೆ. ರೇಖಾಚಿತ್ರಗಳು ತುಂಬಾ ಚೆನ್ನಾಗಿವೆ. ನೀವೇನೂ ತಿಳಿದುಕೊಳ್ಳುವುದಿಲ್ಲವೆಂದರೆ ಒಂದು ಮಾತು. ನಾಯಿ ತನ್ನ ಕೆಲಸ ಮುಗಿಸುವಾಗ ಚಿತ್ರದಲ್ಲಿ ತನ್ನ ಕಾಲೇ ಎತ್ತಿಲ್ಲವಲ್ಲ ? :-)
ಶಂಕರ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನನ್ನ ಛಾಯಾಕನ್ನಡಿ ಬ್ಲಾಗಿನ ಲೇಖನಗಳನ್ನು ಓದಿದ್ದೀರೆಂದು ತಿಳಿದು ಸಂತೋಷವಾಯಿತು.....ತುಂಬಾ ಧನ್ಯವಾದಗಳು....
ಸಾದ್ಯವಾದರೆ ನನ್ನ ಹೊಸ ಲೇಖನಗಳನ್ನು ಓದಿರಿ.....ಅದರಲ್ಲೂ "ತಂಗಿ...ಇದೊ ನಿನಗೊಂದು ಪತ್ರ" ಓದಿ. ನಾನು ಬರೆದ ಲೇಖನಗಳಲ್ಲೇ ಇದು ಅತ್ಯಂತ ಭಾವುಕತೆ ಕೂಡಿದ್ದು ನನಗಿಷ್ಟವಾದ ಲೇಖನ...ಹೀಗೆ ಬರುತ್ತಿರಿ......
ಹಿತ್ತಮ ಮನೆ ಯವರೆ,
ಸಾರ್, ನಿಮ್ಮ ಹೆಸರು ನನಗೆ ತಿಳಿಯಲಿಲ್ಲ....ನೀವು ನನ್ನ ಬ್ಲಾಗ್ ಹಿಂಬಾಲಿಸುತ್ತಿರುವುದು ನನಗೆ ಸಂತೋಷವಾಯಿತು......ಮತ್ತೆ ತುಂಬಾ ದಿನಗಳ ನಂತರ ನನ್ನ ಬ್ಲಾಗಿನಲ್ಲಿ ಕಾಮೆಂಟ್ ಮಾಡಿದ್ದೀರಿ.....ಹೀಗೆ ಬರುತ್ತಿರಿ....ಇನ್ನು ಮುಂದೆ ನನ್ನ ಎಲ್ಲಾ ಲೇಖನಗಳನ್ನು ಛಾಯಾಕನ್ನಡಿಯಲ್ಲೇ ಹಾಕುತ್ತೇನೆ....ಹೀಗೆ ಬರುತ್ತಿರಿ.....ಕಾಮೆಂಟ್ ಮಾಡಿ...ನಿಮ್ಮ ಪ್ರತಿಕ್ರಿಯೆಗಳು ನಮಗೆ ಸ್ಪೂರ್ತಿದಾಯಕ...
ಬಾಲು ಸರ್,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.....
ಶಿವು, ಚೆನಾಗಿದೆ ಬರಹ. ಈ ಬಾರಿ ಊರಿಗೆ ಹೋದಾಗ ನಾಗೇಂದ್ರ ಮುತ್ಮುರ್ಡು ಅವರನ್ನು ಭೇಟಿ ಆಗಿದ್ದೆ (ಅವರು ನನ್ನ ಸಂಬಂಧಿ). ಆಗ ನಿಮ್ಮ ಬಗ್ಗೆ ಪ್ರಸ್ತಾಪ ಬಂದಿತ್ತು. ಮುತ್ಮುರ್ಡು ಊರಿನ ಪುಟಾಣಿಗಳು ನಿಮ್ಮ ಫ್ಯಾನ್ಸ್ ಕಣ್ರೀ!!!
ಶಿವು ಸರ್!
ಹೆಸರು ಮಂಜುನಾಥ ಅಂತ..ಪ್ರಕಾಶ ಹೆಗಡೆಯವರ ಫ್ರೆಂಡು. flickr ನಲ್ಲಿ ನಿಮ್ಮ contacts list ನಲ್ಲಿದ್ದೀನಿ. (www.flickr.com/photos/mrbhat) ನಿಮ್ಮ ಫೊಟೊಗಳ ಅಭಿಮಾನಿ ನಾನು ! ಅಂದ ಹಾಗೆ, ನೀವು orkut ನಲ್ಲಿ ಇದ್ದೀರಾ ?
ಪೂರ್ಣಿಮಾ ಮೇಡಮ್,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ!
ನೀವು ನಾಗೇಂದ್ರನನ್ನು ಬೇಟಿಯಾಗಿದ್ದು ನನಗೆ ತುಂಬಾ ಖುಷಿಯಾಯಿತು...ನಾನು ಅವರ ಮನೆಯ ವಾತಾವರಣದ ಅಭಿಮಾನಿ....ಜೊತೆಗೆ ಅಲ್ಲಿನ ಮಕ್ಕಳ ಕ್ರಿಕೆಟ್ ಆಟದ ಸಹ ಆಟಗಾರಕೂಡ ಆಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕ್ರಿಕೆಟ್ ಆಟವಿದ್ದೇ ಇರುತ್ತದೆ.....
ಅದೆಲ್ಲಕ್ಕಿಂತ ಮುಖ್ಯವಾಗಿ ಅಲ್ಲಿನ ಪುಟಾಣಿಗಳಾದ ಭರತ್, ಜಯಂತ್, ಸ್ವಾತಿ, ವಿಕಾಶ್, ಸುಹಾಸ್......ಇವರೆಲ್ಲಾರ ಅಭಿಮಾನಿ ನಾನು...ಅವರ ಬಗ್ಗೆ ಮುಂದಿನ ಫೋಷ್ಟಿಂಗಿನಲ್ಲಿ ನನ್ನ ಮತ್ತೊಂದು ಛಾಯಾ ಕನ್ನಡಿ ಬ್ಲಾಗಿನಲ್ಲಿ ಹಾಕುತ್ತೇನೆ. ತಪ್ಪದೆ ಬೇಟಿಕೊಡಿ.......
ಮಂಜುನಾಥ್ ಸರ್,
ನೀವು ಪ್ರಕಾಶ ಹೆಗಡೆಯವರ ಗೆಳೆಯರೆಂದಮೇಲೆ ನನಗೂ ಗೆಳೆಯರೆ ಅಲ್ಲವೇ....ನೀವು ನನ್ನ ಫೋಟೋಗಳನ್ನು flickr.com ನೋಡಿ ಮೆಚ್ಚಿದ್ದು ನನಗೆ ಸಂತೋಷವಾಯಿತು.....ಮತ್ತೆ ನಾನು orkutನಲ್ಲಿ ಇಲ್ಲ.........
ಇನ್ನು ಮುಂದೆ ನನ್ನ ಎಲ್ಲಾ ಲೇಖನಗಳನ್ನು [ದಿನಪತ್ರಿಕೆ ವಿತರಣೆಯ ಲೇಖನಗಳು ಸೇರಿದಂತೆ]ನನ್ನ ಮತ್ತೊಂದು ಬ್ಲಾಗ್ "ಛಾಯಾಕನ್ನಡಿ" ಯಲ್ಲಿ ಹಾಕುತ್ತೇನೆ.....ದಯವಿಟ್ಟು ಅಲ್ಲಿಗೆ ಭೇಟಿಕೊಡಿ.....ಅಲ್ಲಿನ ಲೇಖನ ಮತ್ತು ಫೋಟೊಗಳು ನಿಮಗಿಷ್ಟವಾಗಬಹುದು......ಥ್ಯಾಂಕ್ಸ್....
ರೇಖಾಚಿತ್ರಗಳು ಬಲು ಚೆನ್ನಾಗಿವೆ!
ರೇಖಾಚಿತ್ರಗಳು ಬಲು ಚೆನ್ನಾಗಿವೆ!
ಚೈತ್ರಿಕಾ,
ರೇಖಾ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಹಾಯ್ ಶಿವು,
ನನ್ನ ಬ್ಲಾಗಿನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಗಳನ್ನು ಓದುತ್ತಿದ್ದೇನೆ.
ಫೋಟೋಗಳೆಲ್ಲ ತುಂಬ ಚೆನ್ನಾಗಿವೆ.
ನನ್ನ ಕುರಿತು ಇಲ್ಲಿದೆ: http://www.kendasampige.com/article.php?id=2003
ಶಿವು ಅವರೆ,
ರೇಖಾ ಚಿತ್ರಗಳನ್ನೊಳಗೊಂಡ ನಿಮ್ಮ ಲೇಖನ ಮನ ಮುಟ್ಟಿತು. ಪೇಪರ್ ಜಗತ್ತಿನ ಕಿರು ಪರಿಚಯದ ಮೂಲಕವೇ ಅದರೊಳಗಿನ ನಲಿವು, ನೋವನ್ನು ತೆರೆದಿಡುವ ನಿಮ್ಮ ಬರಹ ಇಷ್ಟವಾಯಿತು.
it is very humorous
Chennagide...
ಶಿವು,
ನಿಮ್ಮ ಲೇಖನ ತುಂಬಾ ತಮಾಷೆಯಾಗಿದೆ ಹಾಗೂ ಮನಮುಟ್ಟುವ ನಿರೂಪಣೆಯೊದಿಗೆ ನಿಮ್ಮ ಲೇಖನ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಅದರಲ್ಲಿ ಬಳಸಿರುವ ರೇಖಾಚಿತ್ರಗಳು ಅದ್ಭುತವಗಿವೆ.Keep writing.
nice article... continue like this...:):)
ತೇಜಸ್ವಿನಿ ಮೇಡಮ್
ನಾಯಿ ಪುರಾಣ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....
mirleprasad sir, ರವಿಕಾಂತ್ ಗೋರೆ ಸರ್,
ಬಿಸಿಲ ಹನಿ, ರೂಪ....ಎಲ್ಲರೂ ನನ್ನ ಬ್ಲಾಗಿಗೆ ಬಂದು ನಾಯಿ ಪುರಾಣ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ಸಾಧ್ಯವಾದರೆ ನನ್ನ ಮತ್ತೊಂದು ಮುಖ್ಯ ಬ್ಲಾಗ್ ಛಾಯಾ ಕನ್ನಡಿಯನ್ನು ಬೇಟಿಕೊಡಿ....ಥ್ಯಾಂಕ್ಸ್...
chennagide marayre
ಕಥೆ ತುಂಬ ಸುಂದರವಾಗಿ ಮೂಡಿ ಬಂದಿದೆ. ಒಂದೆರಡು ಸಾಲು ಓದಿ ಆಮೇಲೆ ನೋಡೊಣ ಅಂತಿದ್ದೆ, ಆದರೆ ಮಧ್ಯದಲ್ಲಿ ನಿಲ್ಲಿಸಲು ಮನಸೇ ಬರಲಿಲ್ಲ..
Shivu I dont understand the language..but the pictures speak a thousand words!
;)
ಬರಹ ತುಂಬಾ ಚೆನ್ನಾಗಿದೆ. ಹಾಗೆಯೇ ಅದನ್ನು ಮೀರಿಸುವ ರೇಖಾ ಚಿತ್ರಗಳು. ಹಾಗೆಯೇ ಮಂಗಳೂರು ಕನ್ನಡ ಮಿತ್ರರದ್ದೊಂದು ವೆಬ್ ಸೈಟ್ ಮಾಡಿದ್ದೇವೆ. www.ekanasu.com. ನೋಡಿ ಅಭಿಪ್ರಾಯಗಳನ್ನು ತಿಳಿಸಿ. ಹಾಗೆಯೇ ನಿಮ್ಮ ಬರಹಗಳನ್ನು ಈ ಕನಸಿಗೂ ಕಳುಹಿಸಿಕೊಡಿ
Nice article...
I like your way of writing style..
Dear friends…
“Sakkat”, an ultimate foodies paradise, is going to give you the best kannada writings.. For more details, log on to www.sakkatfood.com, www.sakkatchef.blogspot.com
or contact us @ sakkatchef@gmail.com
or service@sakkatfood.com
or catch us up directly at 94814 71560!
Enjoy our lovely Kannada with fantastic food
Thanks shivu for the lovely comments:)
Nimma 2 blogs thumba chennagide.. :)
Ee lekhana bahala sogasaagi mudi bandide.... odistha hoythu....:)
ಒಂದೇ ಓದಿಗೆ ಎಲ್ಲೂ ನಿಲ್ಲಿಸದೆ ಓದಿಸಿಕೊಂಡು ಹೋಯ್ತು ನಿಮ್ಮೀ ಬರಹ..ಚೆನ್ನಾಗಿದೆ... :)
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
ಸರ್ ಒಮ್ಮೆಗೆ ನಿಮ್ಮ ರೇಖಾ ಚಿತ್ರಗಳ ನೋಡಿದೆ
ಬಹಳ ಹಿಡಿಸಿತು ಮನಕೆ ಇಲ್ಲಿಗೂ ಬನ್ನಿ
sahayaatri.blogspot.com
ರೇಖಾಚಿತ್ರಗಳು ತುಂಬಾ ಚೆನ್ನಾಗಿದೆ.... ನಾಯಿಯ ಬುದ್ದಿ ಅಲ್ಲವಾ.... ಅವಕ್ಕೆ ಚೆಂದ ಆಲ್ವಾ...
ತುಂಬಾ ಚೆನ್ನಾಗಿದೆ ಲೇಖನ.
Very funny incident! and good art work! you are gifted with talent. keep up the work
ಹೆಚ್ಚೂ ಕಮ್ಮಿ ಇದೇ ಸಮಸ್ಯೆ...ನಮ್ಮನ್ನೂ ಕಾಡುತ್ತಿದೆ. ನೂರಾರು ರೂಪಾಯಿ ಕೊಟ್ಟು ಮನೆಯ ಸುತ್ತಲಿನ ಕಸವನ್ನೆಲ್ಲಾ ತೆಗೆಸಿ, ನೀರು ಹಾಕಿ ಸಾರಿಸಿಡುತ್ತೇವೆ. ಮಾರನೆ ದಿನ ಬೆಳಿಗ್ಗೆ ಎದ್ದು ನೋಡಿದರೆ ಡೋರ್ -ಮ್ಯಾಟ್ ಮೇಲೆಯೇ ತೀರ್ಥ, ಪ್ರಸಾದ ಎರಡನ್ನೂ ಬಿಟ್ಟು ಹೋಗಿರುತ್ತವೆ. ಮೊದಮೊದಲು ಇದು ಆಕಸ್ಮಿಕವೆಂದು ಕ್ಲೀನು ಮಾಡಿಸಿದೆವಾದರೂ ಬರಬರುತ್ತಾ ಇಡೀ ಬೀದಿ ನಾಯಿ ಹಿಂದೆ ನಮ್ಮ ಮನೆ ಆವರಣವನ್ನು ಬಳಸಿಕೊಳ್ಳಲು ಆರಂಭಿಸಿದಾಗ ಸಿಟ್ಟಿಗೆದ್ದು ಸಿಕ್ಕ ಸಿಕ್ಕ ನಾಯಿಗಳಿಗೆಲ್ಲ ಹೊಡೆದು ಕೋಪ ತೀರಿಸಿಕೊಂಡೆವು . ಇದು ತಪ್ಪು ಎಂದು ನಮಗೆ ಅರಿವಾಗುವಂತೆ ಮಧ್ಯರಾತ್ರಿ ನಮ್ಮ ಮನೆಯ ಗೇಟಿಗೆ ತಲೆಯಿಟ್ಟು ಹೂಳಿಡುತ್ತಾ ಸೇಡು ತೀರಿಸಿಕೊಳ್ಳುತ್ತಿವೆ. ಮನೆಯ ಆವರಣ ಗಲೀಜಾಗೋದೂ ನಿಂತಿಲ್ಲ. ಬಿಸ್ಕೀಟು ಹಾಕಿ ಎಷ್ಟು ನಾಯಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಸಾಧ್ಯ ಹೇಳಿ.
-ನಾಯಿಗಳಿಂದ ಶೋಷಿತ/ಸಂತ್ರಸ್ತ
ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನುವ ತತ್ವವನ್ನು ಪ್ರತಿಪಾದಿಸಿದ ನಾಯಿ ಬಳಗಕ್ಕೆ ಜೈ ಅನ್ನುತ್ತಾ ಇ೦ತಹ ಒಳ್ಳೇಯ ಕಥೆಯನ್ನು ನೀಡಿದ ತಮಗೆ ಧನ್ಯವಾದ ಅರ್ಪಿಸುತ್ತೇವೆ.
ನಿಮಗೂ ಕೂಡ ಮಕರ ಸಂಕ್ರಾಂತಿಯ ಶುಭಾಶಯಗಳು
ನಿಮ್ಮ ರೇಖಾ ಚಿತ್ರಗಳು ತುಂಬಾ ಇಷ್ಟವಾದವು.
ಚಿತ್ರ ಸಹಿತ ತುಂಬಾನೇ ಇಷ್ಥ ಆಯ್ತು...........
ಒಳ್ಳೆ ಬರಹ ಸರ್!
ರೇಖಾ ಚಿತಗಳು ಮಜವಾಗಿವೆ.
- ಬದರಿನಾಥ ಪಲವಳ್ಳಿ
pl. visit my Kannada poems blog:
www.badari-poems.blogspot.com
shivu sir,
Nimma blog tumba chenaagide... modala bheti nimma blog ge... good one keep writing.
ಸುಂದರ ರೇಖಾ ಚಿತ್ರಗಳು
ಒಪ್ಪುವ ಬರಹ
ಅಭಿನಂದನೆಗಳು
ಬಹುಮುಖ ಪ್ರತಿಭೆಯ ಶಿವೂರವರೆ,
ನಿಮ್ಮ ಹಾಸ್ಯ ನಿರೂಪಣೆ ಮತ್ತು ರೇಖಾಚಿತ್ರಗಳು ಚೆನ್ನಾಗಿವೆ. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.
This blog is nice.
ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ
ಸತೀಶ್ ನ ಗೌಡ
www.nannavalaloka.blogspot.com
shivu sir nimma lekhanatumbaa chennaagide.nirupana shailiamogha. tumbaa nagu bantu,haage nimma sthitige,ayyo paapaa,ennisitu.sadhya geletanadidanaadru parihaara sikkitalla,samaadaana oitu.abhinandanegalu nimage
Nice one Shivu. Simple and cute
Rekha chitragalu sooper..
Maniya nayi padu helida reethi sakath.. chennagide
nanna blog ge banni nenapinasalu.blogspot.com
Pravi
ಪ್ರೋತ್ಸಾಹಕ್ಕೆ ಧನ್ಯವಾದಗಳು!
ಶುಭವಾಗಲಿ.
ಪ್ರೀತಿಯಿಂದ,
ಅದಮ್ಯಾಯುಷ್ಯ
ನಿರೂಪಣೆ ತುಂಬಾ ಚನ್ನಾಗಿದೆ, ರೇಖಾಚಿತ್ರಗಳು ಮತ್ತಷ್ಟು ಮೆರುಗನ್ನು ಕೊಟ್ಟಿವೆ, ಒಳ್ಳೆಯ ಲೇಖನ -- ಸತೀಶ್ ಬಿ ಕನ್ನಡಿಗ
ITS VERY GOOD STORY
DUDE KEEP IT UP. . .
AND LEAVE NEW STORIES IN BLOG
Post a Comment